ಮ್ಯಾರಥಾನ್ -
 ಗ್ರೀಸಿನ ಅಥೆನ್ಸ್ ನಗರದ ಈಶಾನ್ಯದಲ್ಲಿ ಸುಮಾರು 40 ಕಿ.ಮೀ. ದೂರದಲ್ಲಿರುವ ಒಂದು ಕಿರಿದಾದ ಮೈದಾನ. ಗ್ರೀಕರೂ ಪರ್ಷಿಯನ್ನರೂ ಕ್ರಿ.ಪೂ. 490ರಲ್ಲಿ ಕಾದಾಡಿದ ಯುದ್ಧಭೂಮಿ. ಪರ್ಷಿಯದ ದೊರೆ ಡೇರಿಯಸ್‍ನ ವಿರುದ್ಧ ಐಓನಿಯನ್ನರು ದಂಗೆ ಎದ್ದರು. ಪರ್ಷಿಯದ ದೊರೆ ಸಹಾಯ ನೀಡಿದರು. ಇದರಿಂದ ಕುಪಿತನಾದ ಡೇರಿಯಸ್ ಇವರನ್ನು ಅಡಗಿಸಲು ದೊಡ್ಡ ಸೈನ್ಯವನ್ನು ಕಳುಹಿಸಿದ. ಐಓನಿಯನ್ನರಿಗೆ ಅಥೆನ್ಸಿನಿಂದ, ಎರಿಟ್ರಿಯಾದಿಂದ ಸಹಾಯ ದೊರಕಿದರೂ ಅವರು ಸೋತರು. ಡೇರಿಯಸ್ ದಂಗೆಕೋರರಿಗೆ ಸಹಾಯ ನೀಡಿ ಅಥೆನ್ ನಗರವನ್ನು ಮುತ್ತಲು ನಿರ್ಧರಿಸಿದ. ಮೊದಲ ದಂಡಯಾತ್ರೆ ನಿಷ್ಪಲವಾಯಿತು. ಮತ್ತೊಂದು ನೌಕಾ ಸೇನೆಯನ್ನು ಸಿದ್ಧಗೊಳಿಸಿದ. ಈ ಸೈನ್ಯ ಎರಿಟ್ರಿಯಾವನ್ನು ನಾಶಮಾಡಿ ಅಥೆನ್ಸ್ ಕಡೆಗೆ ತಿರುಗಿತು. ಅಥೆನ್ಸ್‍ಗೆ 40 ಕಿ.ಮೀ. ದೂರದ ಮ್ಯಾರಥಾನ್ ಬಯಲುಪ್ರದೇಶದಲ್ಲಿ ಕ್ರಿ.ಪೂ. 490ರಲ್ಲಿ ಕಾಳಗ ನಡೆಯಿತು. ಗ್ರೀಕರು ತಮ್ಮ ಎರಡು ಪಟ್ಟು ಸೈನಿಕರಿಂದ ಪರ್ಷಿಯನ್ನರನ್ನು ಸೋಲಿಸಿದರು. ಈ ಕದನ ಇತಿಹಾಸದಲ್ಲಿ ಒಂದು ನಿರ್ಧಾರಕ ಕದನವೆಂದು ಪ್ರಸಿದ್ಧವಾಯಿತು. ಅಥೇನಿಯನ್ನರ ಧೈರ್ಯ, ಸಾಹಸ, ದೇಶಾಭಿಮಾನ, ಎಲ್ಲರನ್ನೂ ಬೆರಗುಗೊಳಿಸಿತು.

ತಮಗಿಂತಲೂ ಹೆಚ್ಚು ಸೈನ್ಯವಿದ್ದ ಪರ್ಷಿಯನ್ನರನ್ನು ಸೋಲಿಸಲು ಗ್ರೀಕರು ಅಗ ಸ್ಪಾರ್ಟದ ನೆವು ಕೋರಿದರು. ಅದಕ್ಕಾಗಿ ಅಥೆನ್ಸ್ ನಗರದ ವೇಗದ ಓಟಗಾರನಾಗಿದ್ದ ಫೀಡಿಪಿಡೆಸ್‍ನನ್ನು ಸಹಾಯದ ಯಾಚನೆಗೆ ಕಳುಹಿಸಿಕೊಟ್ಟರು. ಸುಮಾರು 240 ಕಿ.ಮೀ. ದೂರದ ಸ್ಪಾರ್ಟಕ್ಕೆ ಅತ ಓಡಿಹೋಗಿ ತನ್ನ ಕಾರ್ಯ ನೆರವೇರಿಸಿ. ಅದರೆ ಸೇರೆ ಬರುವುದರೊಳಗೆ ಯುದ್ಧ ಮುಗಿದು ಗ್ರೀಕರು ಪರ್ಷಿಯನ್ನರನ್ನು ಸೋಲಿಸಿದ್ದರು. ತಮ್ಮ ಜಯದ ಸುದ್ದಿಯನ್ನು ತಿಳಿಸಲು ಅಲ್ಲಿಂದ ಫೀಡಿಪಿಡೆಸ್ ಮತ್ತೆ ಸು. 36.75 ಕಿ.ಮೀ. ದೂರ ಓಡಿ ಬಂದು ತಮ್ಮ ಜನರಿಗೆ ಸುದ್ದಿ ತಿಳಿಸಿದ; ಅದರೆ ಒಂದೇ ಸಮನೆ ಹೆಚ್ಚುದೂರ ಓಡಿದ್ದರಿಂದ ಅಗ ಅಲ್ಲೇ ಕುಸಿದು ಬಿದ್ದು ಸತ್ತ. ಗ್ರೀಕರ ದೇಶಭಕ್ತಿ ಫೀಡಿಪಿಡೆಸ್‍ನ ಸಾಹಸ ಪ್ರಸಿದ್ಧವಾಯಿತು.

ಇಂದು ಮ್ಯಾರಥಾನ್ ಒಲಂಪಿಕ್ ಕ್ರೀಡೆಯ ಒಂದು ಭಾಗವಾಗಿದೆ. ಯಾವುದೇ 42.195 ಕಿಲೋಮೀಟರ್ ದೂರ ಮತ್ತು ಅದಕ್ಕೂ ಅಧಿಕ ದೂರದ ಓಟಕ್ಕೆ ಮ್ಯಾರಥಾನ್ ಎಂದು ಕರೆಯುತ್ತಾರೆ.					
  (ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ